Saturday, May 9, 2009

swamy1

ಹಂದಿಜ್ವರ ಹರಡಿದ ಅಮೆರಿಕ


ಡೀ ವಿಶ್ವವೀಗ ಹಂದಿಜ್ವರದ ಭೀತಿಯಲ್ಲಿದೆ. ಅಮೆರಿಕದ ನೆರೆಯ ದೇಶ ಮೆಕ್ಸಿಕೊದಲ್ಲಿ 150ಕ್ಕೂ ಹೆಚ್ಚು ಮಂದಿ ಈ ಜ್ವರದಿಂದ ಮೃತಪಟ್ಟಿದ್ದಾರೆ. ಪ್ರಪಂಚದ ಒಟ್ಟು 21 ದೇಶಗಳ ಸುಮಾರು 1,500 ಮಂದಿಗೆ ಜ್ವರದ ಸೋಂಕು ತಗುಲಿದೆ. ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳು ಜ್ವರದ ಭೀತಿಗೆ ಗಡಗಡನೆ ನಡುಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿವೆ. ಅಮೆರಿಕದ ಅಧ್ಯಕ್ಷ ಬಾರಕ್ ಒಬಾಮರಂತೂ ಈ ಜ್ವರ ಮುಂದೆ ಭೀಕರ ಪರಿಣಾಮಗಳನ್ನುಂಟು ಮಾಡಬಹುದು ಎಂದು ಭವಿಷ್ಯ ನಡುದಿದ್ದು, ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹಂದಿಜ್ವರದ ವೈರಸ್ ಎಂದೇ ಕರೆಯಲಾಗುತ್ತಿರುವ ಎ-ಎಚ್1ಎನ್1 ವೈರಸ್ ಹೆಚ್ಚು ಪ್ರಬಲವಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಹೇಳುತ್ತಿದೆ. ಅಲ್ಲದೆ, ಇದನ್ನು ಮಹಾಮಾರಿ ಎಂದು ಘೋಷಿಸಲು ಅದು ನಿರಾಕರಿಸಿದೆ. ಆದರೆ ಅಮೆರಿಕ ಆಡಳಿತಕ್ಕೆ ಮಾತ್ರ ಭೀತಿ ಕಡಿಮೆಯಾಗಿಲ್ಲ. ಎಷ್ಟೇ ಆದರೂ `ಕಳ್ಳನ ಮನಸ್ಸು ಹುಳ್ಳಗೆ ತಾನೆ?


ಏನಿದು ಹಂದಿಜ್ವರ?
`ಹಂದಿಜ್ವರ ಎಂದು ತಪ್ಪಾಗಿ ಕರೆಯಲಾಗುತ್ತಿರುವ ಈ ಇನ್ಫ್ಲುಯೆಂಝಾ(ಫ್ಲೂ)ಗೆ ಕಾರಣ ಎ-ಎಚ್1ಎನ್1 ಎಂಬ ವೈರಾಣು. 1918ರಲ್ಲಿ ಇದೇ ರೀತಿಯ `ಸ್ಪ್ಯಾನಿಷ್ ಫ್ಲೂ ಎಂಬ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡು ಪ್ರಪಂಚದಾದ್ಯಂತ ಐದು ಕೋಟಿ ಜನರನ್ನು ಬಲಿತೆಗೆದುಕೊಂಡಿತ್ತು. 1957ರಲ್ಲಿ ಏಷ್ಯನ್ ಫ್ಲೂ ಮತ್ತು 1968ರಲ್ಲಿ ಹಾಂಕಾಂಗ್ ಫ್ಲೂ ಎಂಬ ಮಹಾಮಾರಿಗಳು ವಿಶ್ವವನ್ನು ಹೆದರಿಸಿದ್ದವು. ಈಗ ಕಾಣಿಸಿಕೊಂಡಿರುವ ಈ ಹೊಸ ಮಾರಿ ಕೂಡ ಸಂಶೋಧಕರ ನಿದ್ರೆಗೆಡಿಸಿದೆ. ಏಕೆಂದರೆ ಇದರ ವೈರಾಣು ಸಹಜವಾಗಿಲ್ಲ!
ಹೌದು, ಎ-ಎಚ್1ಎನ್1 ಎಂದು ಕರೆಯಲಾಗುತ್ತಿರುವ ಹಂದಿ ಜ್ವರದ ವೈರಾಣು ಪ್ರಾಕೃತಿಕವಾಗಿ ಸೃಷ್ಟಿಯಾದಂತೆ ಕಾಣುತ್ತಿಲ್ಲ. ಇದರ ಹಿಂದೆ ಮಾನವನ ಕೈವಾಡವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳೇ ಅನುಮಾನಿಸಿದ್ದಾರೆ. ಅಂದರೆ ಯಾರೋ ಬೇಕೆಂದೇ ಈ ವೈರಾಣುವನ್ನು ಸೃಷ್ಟಿಸಿ, ಹಂದಿಜ್ವರವನ್ನು ಹರಡಿರಬಹುದು ಎಂಬ ಶಂಕೆ ಅವರದು.
ಎಚ್1ಎನ್1 ವೈರಾಣುವನ್ನು ವಿಶ್ಲೇಷಿಸಿದಾಗ ಅದರಲ್ಲಿ ಹಕ್ಕಿಯ, ಮಾನವನ ಮತ್ತು ಹಂದಿಯ ವೈರಾಣುಗಳು ಥಳಕು ಹಾಕಿಕೊಂಡು ಹೊಸ ರೂಪ ಪಡೆದಿರುವುದು ಗೊತ್ತಾಗಿದೆ. ಈ ರೀತಿ ಪ್ರಾಕೃತಿಕವಾಗಿ ವೈರಾಣುಗಳು ಥಳಕು ಹಾಕಿಕೊಂಡು ಹೊಸ ರೂಪ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲದಿದ್ದರೂ, ಈ ಕೆಲಸವನ್ನು ಸುಲಭವಾಗಿಯೇ ಮಾನವ ಮಾಡಿರುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಈ ರೀತಿಯ ಸಂಶೋಧನೆಗಳಿಗೆ ಈಗ ಬೇರೆಯದೇ ಆದ ಆಯಾಮಗಳಿದ್ದು, ಅದರಲ್ಲಿ ಮುಖ್ಯವಾದದು ಜೈವಿಕ ಅಸ್ತ್ರ ತಯಾರಿಕೆ.


ವೈರಾಣು ಸಿದ್ಧವಾಗಿದ್ದು ಅಮೆರಿಕದಲ್ಲಿ
ಶತ್ರುದೇಶವನ್ನು ಮಣಿಸಲು ಅಮೆರಿಕ ಈ ಹಿಂದಿನಿಂದಲೂ ಅನುಸರಿಸುತ್ತಿರುವ ಮಾರ್ಗಗಗಳಲ್ಲಿ ಜೈವಿಕ ದಾಳಿಯೂ ಒಂದು. ಪೆಂಟಗನ್ ಈ ರೀತಿಯ ಜೈವಿಕ ಅಸ್ತ್ರಗಳನ್ನು ರೂಪಿಸುವುದರಲ್ಲಿ ಎತ್ತಿದ ಕೈ. ಈಗಾಗಲೇ ಹಲವಾರು ರೋಗಾಣುಗಳನ್ನು ರೂಪಿಸಿ, ಅವುಗಳನ್ನು ಪ್ರಯೋಗಿಸಿ ಸಾವಿರಾರು ಮುಗ್ದ ನಾಗರಿಕರ ಸಾವಿಗೆ ಕಾರಣವಾಗಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ.
ಅಮೆರಿಕ ಸೇನೆ ಇದಕ್ಕಾಗಿಯೇ ವಿಶೇಷ ಘಟಕವನ್ನೂ ಹೊಂದಿದ್ದು, ಒಂದು ವರದಿ ಪ್ರಕಾರ ಆ ದೇಶದ ವಿವಿಧ ರಾಜ್ಯಗಳಲ್ಲಿ ಈ ಜೈವಿಕ ಅಸ್ತ್ರಗಳ ವಿವಿಧ ಮಾದರಿ ಕುರಿತು ಪ್ರಯೋಗ ನಡೆಸುವ ಸುಮಾರು 35 ಘಟಕಗಳಿವೆ.
ರೋಗ ಹರಡುವ ವೈರಾಣುಗಳನ್ನು ಸೃಷ್ಟಿಸುವ ಮೂಲಕ ಮಾನವ ಸಂಪನ್ಮೂಕ್ಕೆ ಹೊಡೆತ ನೀಡುವುದು, ಬೆಳೆ ನಾಶಮಾಡುವ ಹೊಸ ಹೊಸ ಕೀಟಗಳನ್ನು, ರೋಗಗಳನ್ನು ಸೃಷ್ಟಿಸಿ ಕೃಷಿ ಉತ್ಪಾದನೆಗೆ ಹೊಡೆತ ನೀಡುವುದು, ಅಪಾಯಕಾರಿ ರಾಸಾಯನಿಕಗಳನ್ನು ಗೊತ್ತಾಗದಂತೆ ಹರಡಿ ಸಾಮೂಹಿಕ ನರಹತ್ಯೆ ನಡೆಸುವುದು ಅಮೆರಿಕದ ಯುದ್ಧತಂತ್ರದ ಒಂದು ಭಾಗವಾಗಿದೆ. ಈಗ ಈ ಹಂದಿಜ್ವರವನ್ನೂ ಅಮೆರಿಕ ಜೈವಿಕ ಅಸ್ತ್ರವಾಗಿ ಬಳಸಿರಬಹುದು ಎಂಬ ಅನುಮಾನಗಳಿಗೂ ಸಾಕಷ್ಟು ಬಲವಾದ ಕಾರಣಗಳಿವೆ.
1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಫ್ಲೂ ಕೋಟ್ಯಂತರ ಜನರನ್ನು ಬಲಿ ತೆಗೆದುಕೊಂಡಿತ್ತು. ಈ ರೋಗದಿಂದ ಮೃತಪಟ್ಟ ಮಹಿಳೆಯೋರ್ವಳ ದೇಹವನ್ನು ಪತ್ತೆ ಹಚ್ಚಿದ್ದ ಅಮೆರಿಕ ಸೇನೆಯ ವಿಜ್ಞಾನಿಗಳು, ಆಕೆಯ ದೇಹದ ಜೀನ್ಸ್ಗಳನ್ನು ಸಂಗ್ರಹಿಸಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು `ಎಚ್5ಎನ್1 ಎಂಬ ವೈರಾಣು ಸೃಷ್ಟಿಸಿದ್ದರು. ಈ ವೈರಾಣುವಿನಿಂದ ಬರುವ ಜ್ವರವನ್ನೇ ಹಕ್ಕಿಜ್ವರ ಎಂದು ಕರೆಯಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಜ್ವರ ತೃತೀಯ ರಾಷ್ಟ್ರಗಳಲ್ಲಿ ಎಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಕಾಣಿಸಿಕೊಂಡಿರುವ ಹಂದಿ ಜ್ವರದ ವೈರಾಣುವಿನಲ್ಲಿಯೂ ಹಕ್ಕಿಜ್ವರದ ಕೆಲ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಹಂದಿಜ್ವರವನ್ನು ಕೂಡ ಅಮೆರಿಕದ ವಿಜ್ಞಾನಿಗಳೇ ಸೃಷ್ಟಿಸಿದ್ದಾರೆ ಎಂದು ವಿಶ್ವಸಂಸ್ಥೆ ವಿಜ್ಞಾನಿಗಳೇ ಹೇಳುತ್ತಿದ್ದಾರೆ. ವಿಜ್ಞಾನಿಗಳ ಸಮುದಾಯ ಈ ಕುರಿತು ಆರೋಪ -ಪ್ರತ್ಯಾರೋಪಗಳಲ್ಲಿ ತೊಡಗಿದೆ. ಪಾಪಾ ಇದೇನೂ ತಿಳಿಯದ ಮೆಕ್ಸಿಕೋ ಮತ್ತಿತರ ದೇಶಗಳ ಮುಗ್ದ ಜನರ ಮರಣ ಹೋಮ ಮುಂದುವರೆದಿದೆ.
ಅಮೆರಿಕದಲ್ಲಿ ಈ ರೋಗಾಣು ಸೋರಿಕೆಯಾಗುತ್ತಿದ್ದಂತೆಯೇ ಅಲ್ಲಿಯ ಕೆಲ ಪತ್ರಿಕೆಗಳು ಇದು ಚೀನಾದ ಕೃತ್ಯ ಎಂದು ಆರೋಪಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಯಾರು, ಎಲ್ಲಿ ಈ ವೈರಾಣು ಸಿದ್ಧಪಡಿಸಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗಪಡಿಸುತ್ತೇವೆ ಎಂದು ಅವಾಜ್ ಹಾಕುತ್ತಿದ್ದಂತೆಯೇ ಅಮೆರಿಕ ಮಾಧ್ಯಮಗಳು ಬಾಲ ಮುದುರಿಕೊಂಡು ಕುಳಿತವು.
ಆದರೆ ಅಮೆರಿಕ ಅಧಿಕಾರಿಗಳು ಒಂದು ಯಡವಟ್ಟು ಮಾಡಿಕೊಂಡರು ಅದೇನೆಂದರೆ, ಈ ಅಪಾಯಕಾರಿ ವೈರಾಣು ಸೋರಿಕೆಯಾದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವಿಶ್ವ ಆರೋಗ್ಯಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಕೊನೆಗೆ ಅಮೆರಿಕದಲ್ಲಿಯೇ ಈ ವೈರಸ್ ಹರಡಲು ಆರಂಭವಾದಾಗ ಹೆದರಿ ಡಬ್ಲ್ಯುಎಚ್ಒನ್ನು ನಾವು ಎಚ್ಚರಿಸಿದರೂ ನಿರ್ಲಕ್ಷ್ಯ ತೋರಿತು ಎಂದು ಆರೋಪಿಸಿ ಗಲಾಟೆ ಮಾಡಿದರು. ಕೊನೆಗೆ ವಿಶ್ವಸಂಸ್ಥೆ ಅಧಿಕಾರಿಗಳಿಂದ ಇಕ್ಕಿಸಿಕೊಂಡಿದ್ದಾರೆ.


ಇದು ಎರಡನೇ ಬಾರಿ

ಅಮೆರಿಕ ಈ ರೀತಿ ತಾನೇ ಸಿದ್ಧಪಡಿಸಿದ ಬಾಂಬ್ನ್ನು ತನ್ನ ಕಾಲಮೇಲೇ ಹಾಕಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. 2001ರಲ್ಲಿ ಅಮೆರಿಕ ಮೇಲೆ ದಾಳಿ ನಡೆಯಿತಲ್ಲ, ಆಗ ಜೈವಿಕ ಅಸ್ತ್ರಗಳ ದಾಳಿ ಕೂಡ ನಡೆಯಬಹುದೆಂಬ ಆತಂಕವೂ ಎದುರಾಗಿತ್ತು. ಆಗ ತಾನೇ ಸಿದ್ಧಪಡಿಸಿದ ಆಂಥ್ರ್ಯಾಕ್ಸ್ನ ಪ್ರಯೋಗಿಸಿಕೊಂಡು ಭದ್ರತೆಯನ್ನು ಬಲಪಡಿಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಅದೆಲ್ಲಿ ಎಡವಟ್ಟಾಯಿತೋ ಏನೋ ದೇಶದ ಐವರು ನಾಗರಿಕರು ಆಂಥ್ರ್ಯಾಕ್ಸ್ಗೆ ಬಲಿಯಾದರು. ಇದರಿಂದ ಈ ಕುರಿತು ತನಿಖೆ ನಡೆಸುವುದು ಅನಿವಾರ್ಯವಾಯಿತು. ತನಿಖೆ ಸಂದರ್ಭದಲ್ಲಿ ಆರೋಪಿ ವೈದ್ಯನೋರ್ವ ಆತ್ಮಹತ್ಯೆ ಮಾಡಿಕೊಂಡ. ಪ್ರಕರಣ ಅಲ್ಲಿಗೆ ಅಂತ್ಯಗೊಂಡಿತು. ಆತ ಏಕೆ ಆತ್ಮಹತ್ಯೆಮಾಡಿಕೊಂಡ, ಅದೇನಾದರೂ ಕೊಲೆಯೇ? ಅಮೆರಿಕವನ್ನು ಪ್ರಶ್ನಿಸುವವರಾರು?

ಈಗ ಹೊಸ ವೈರಾಣು `ಹಂದಿಜ್ವರವನ್ನು ಕೂಡ ಅಮೆರಿಕ ಸೇನೆಯ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದೆ. ಇದು ನಿಜವಾಗಿಯೂ ಪರಿಣಾಮ ಬೀರಬಲ್ಲದೇ ಎಂದು ಪ್ರಯೋಗ ನಡೆಸಲುದ್ದೇಶಿಸಿದ್ದರು. ಅದೇಗೋ ಈ ವೈರಾಣು ಬಹುರಾಷ್ಟ್ರೀಯ ಕಂಪನಿ ಸ್ಮಿತ್ಫೀಲ್ಡ್ನ ಹಂದಿಫಾರಂಗಳಲ್ಲಿರುವ ಹಂದಿಗಳನ್ನು ಸೇರಿಕೊಂಡಿತ್ತು. ಈ ಕಂಪನಿ ಹೆಚ್ಚಾಗಿ ಮೆಕ್ಸೋದಲ್ಲಿ ಹಂದಿಫಾರಂಗಳನ್ನು ಹೊಂದಿದೆ. ಅಲ್ಲಿಯ ಫಾರಂ ಹಂದಿ ಮೂಲಕ ಮೊದಲಿಗೆ ಮೂರು ವರ್ಷದ ಬಾಲಕನಿಗೆ, ನಂತರ ಇತರರಿಗೆ ವೈರಾಣು ಸೋಂಕಿದೆ. ಅಲ್ಲಿಂದ ಅದು ಈಗ ವಿಶ್ವವ್ಯಾಪಿ. ಪಾಪ ಅಮೆರಿಕಕ್ಕೇ ಈ ರೋಗ ನಿಯಂತ್ರಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ತಾನು ತೋಡಿದ ಗುಂಡಿಯಲ್ಲಿ ತಾನೇ ಬಿದ್ದು ಅದು ಗುರ್ಗುಟ್ಟುತ್ತಿದೆ.
ವಿಶೇಶ ವೆಂದರೆ ಆಂಥ್ರ್ಯಾಕ್ಸ್ ಸೋರಿಕೆಯಾದ ಅಮೆರಿಕ ಸೇನೆಗೆ ಸೇರಿದ ಪ್ರಯೋಗಾಲಯದಿಂದಲೇ ಈ ಎಚ್1ಎನ್1 ವೈರಸ್ಕೂಡ ಸೋರಿಕೆಯಾಗಿದೆ ಎಂದು ಸೇನಾಮೂಲಗಳು ಹೇಳಿವೆ. ಈ ಪ್ರಯೋಗಾಲಯ ಮೇರಿ ಲ್ಯಾಂಡ್ನ ಫೊಟರ್್ ಡಿಟ್ರಿಕ್ನಲ್ಲಿದೆ. ಇದು ಅಮೆರಿಕ ಸೇನೆಯ ಬಹುದೊಡ್ಡ ಜೈವಿಕ ಪ್ರಯೋಗಾಲಯವಾಗಿದ್ದು, ಈಗ ಈ ವೈರಾಣು ಸೋರಿಕೆ ಬಗ್ಗೆ ಅತ್ಯುನ್ನತ ತನಿಖೆಗೆ ಆದೇಶ ನೀಡಲಾಗಿದೆ ಎಂದು ಈ ಪ್ರಯೋಗಾಲಯದ ವಕ್ತಾರ ಚಾದ್ ಜೋನ್ಸ್ ತಿಳಿಸಿದ್ದಾರೆ.


ಚಿಕೂನ್ ಗುನ್ಯಾದ ಜನಕ ಅಮೆರಿಕ
ಕೇವಲ ಹಂದಿ ಜ್ವರ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಭಾಗದಲ್ಲಿ ಈ ವರ್ಷವೂ ಮತ್ತೆ ಕಾಣಿಸಿಕೊಂಡಿರುವ ಚಿಕೂನ್ ಗುನ್ಯಾ ಕಾಯಿಲೆ ಸೃಷ್ಟಿಸಿದ್ದು ಕೂಡ ಅಮೆರಿಕವೇ.
ಚಿಕೂನ್ ಗುನ್ಯಾಕ್ಕೆ ಕಾರಣವಾಗಿರುವುದು `ಆಲ್ಫಾ ವೈರಸ್. ಇದನ್ನು ಜೈವಿಕ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಕೂಡ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯ ಡ್ರಗ್ಸ್ ಅಂಡ್ ಕ್ರೈಮ್ ವಿಭಾಗ ಈ ರೋಗಾಣುವಿನ ಬಗ್ಗೆ ಎಚ್ಚರಿಕೆಯಿಂದಿರಿ ಎಂದಿದೆ. ಅಮೆರಿಕ ರಕ್ಷಣಾ ಇಲಾಖೆಯ ಜೈವಿಕ ಅಸ್ತ್ರಗಳ ಪಟ್ಟಿಯಲ್ಲಿಯೂ ಇದರ ಹೆಸರಿದೆ.
ಈ ವೈರಸ್ 1952ರಲ್ಲಿಯೇ ತಾಂಜಾನಿಯಾದಲ್ಲಿ ಕಾಣಿಸಿಕೊಂಡಿತ್ತು. ಅಂದಿನಿಂದಲೂ ಈ ವೈರಾಣುವನ್ನು ಸೃಷ್ಟಿಸಿದವರು ಯಾರೆಂಬ ಚಚರ್ೆ ನಡೆಯುತ್ತಲೇ ಬಂದಿದೆ. ಆದರೆ ಅಮೆರಿಕ ಮೂಲದ ಸೇನಾ ಮಾಹಿತಿ ನೀಡುವ `ಗ್ಲೋಬಲ್ ಸೆಕ್ಯುರಿಟಿ ಡಾಟ್ ಕಾಮ್ ಎಂಬ ವೆಬ್ ಅಮೆರಿಕವೇ ಈ ವೈರಾಣು ಸೃಷ್ಟಿಸಿದೆ. ಇದನ್ನು 1975ರಲ್ಲಿಯೇ ಅಮರಿಕ ಅಧಿಕೃತವಾಗಿಯೇ ಒಪ್ಪಿಕೊಂಡಿದೆ ಎಂದು ಹೇಳುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ನಮ್ಮ ದೇಶದಲ್ಲಿ ಚಿಕೂನ್ ಗುನ್ಯಾದ ಕಾಟ ಅತಿಯಾಗಿದೆ. ಕೃಷಿ ಚಟುವಟಿಕೆ ಆರಂಭವಾಗುವ ಹೊತ್ತಿನಲ್ಲಿಯೇ ಈ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ನಮ್ಮ ದೇಶದ ರೈತರು ಪರದಾಡುತ್ತಿದ್ದಾರೆ. ದೇಶದ ಕೃಷಿ ಉತ್ಪಾದನೆ ಕುಸಿಯುವಂತೆ ಮಾಡಲು ಈ ಅಸ್ತ್ರ ಬಳಸಲಾಗುತ್ತಿದೆ ಎಂಬ ಅನುಮಾನಗಳಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ತಾಕತ್ತು ನಮ್ಮ ಸಕರ್ಾರಕ್ಕೆಲ್ಲಿದೆ?
ಇನ್ನು ನಮ್ಮ ರಾಜ್ಯದಲ್ಲಿ ಮಾತ್ರ, ಅದರಲ್ಲೂ ಮಲೆನಾಡಿನಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಎಂದೇ ಹೆಸರಾಗಿರುವ `ಕ್ಯಾಸನೂರು ಕಾಡಿನ ಕಾಯಿಲೆಗೆ ಕಾರಣವಾಗುವ ವೈರಾಣುಗಳು ಕೂಡ ಜೈವಿಕ ಅಸ್ತ್ರವಾಗಿ ಬಳಸಲ್ಪಟ್ಟ ಏಜೆಂಟ್ಗಳು ಎಂದು ಸಾಬೀತಾಗಿದೆ. ಈ ರೋಗ ಕಾಣಿಸಿಕೊಂಡು ಸುಮಾರು ಆರು ದಶಕಗಳಾಗುತ್ತಾ ಬಂದಿದ್ದರೂ ಈ ಕಾಯಿಲೆಗೆ ಔಷಧ ಕಂಡುಹಿಡಿಯಲಾಗಿಲ್ಲ. ಹಕ್ಕಿಗಳ ಮೂಲಕ ಈ ವೈರಾಣುವನ್ನು ಹರಡುವ ಪ್ರಯೋಗ ನಡೆಸಲಾಗಿತ್ತೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕವೇ ಈ ವೈರಾಣುವನ್ನು ಸೃಷ್ಟಿಸಿದೆ. ಪಾಪ ಪ್ರತಿವರ್ಷ ಬಲಿಯಾಗುತ್ತಿರುವವರು ನಮ್ಮ ಮಲೆನಾಡಿನ ಜನರು.
ಭಾರತದ ನೆಲದಲ್ಲಿಯೇ ಅಮೆರಿಕ ಈ ರೀತಿಯ ವೈರಾಣುಗಳ ಪ್ರಯೋಗ ನಡೆಸಿದ ಉದಾಹರಣೆಗಳಿವೆ. 1975ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅಮೆರಿಕದ ಇಂತಯ ಯೋಜನೆಯೊಂದನ್ನು ರದ್ದು ಪಡಿಸಿದ್ದರು. ಹರಿಯಾಣದ ಸೊನೆಪತ್ನಲ್ಲಿ ಸೊಳ್ಳೆಗಳ ಮೇಲೆ ನಡೆಸಲು ಉದ್ದೇಶಿಸಿದ್ದ ಈ ಸಂಶೋಧನೆಯಿಂದ ಕಾಮಾಲೆ ಮತ್ತು ಡೆಂಗ್ಯೂಜ್ವರ ಹರಡುವ ಸೊಳ್ಳೆಗಳು ಉತ್ಪತ್ತಿಮಾಡಲಾಗುತ್ತಿತ್ತು. ಹೀಗೆ ತೃತೀಯ ದೇಶಗಳಲ್ಲಿ ಸಂಶೋಧನೆ ಹೆಸರಿನಲ್ಲಿ ಜೈವಿಕ ಅಸ್ತ್ರವಾಗಿ ಬಳಸಬಲ್ಲ ಏಜೆಂಟ್ಗಳನ್ನು ಸೃಷ್ಟಿಸುತ್ತಾ ಬಂದಿರುವ ಅಮೆರಿಕ, ಆಯಾ ದೇಶಗಳಲ್ಲಿಯೇ ಪ್ರಯೋಗ ನಡೆಸುವ ಪರಿಪಾಠವನ್ನು ರೂಢಿಸಿಕೊಂಡಿತ್ತು. (ಸೂರತ್ನಲ್ಲಿ ಪ್ಲೇಗ್ ಹರಡಲೂ ಇದೇ ರೀತಿಯ ಪ್ರಯೋಗ ಕಾರಣ) ಆದರೆ ತೃತೀಯ ದೇಶಗಳು ಎಚ್ಚೆತ್ತು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಮೆರಿಕ ತನ್ನ ದೇಶದಲ್ಲಿಯೇ ಈ ರೀತಿಯ ವೈರಾಣುಗಳನ್ನು ಸೃಷ್ಟಿಸಲು ಹೊಸ ಹೊಸ ಪ್ರಯೋಗಾಲಯಗಳನ್ನು ತೆರೆಯುತ್ತಿದೆ. ಅವುಗಳು ಸೋರಿಕೆಯಾಗಿ ಅನಾಹುತವಾದಾಗ ವಿಶ್ವಸಂಸ್ಥೆಯನ್ನು ದೂರತ್ತದೆ.

No comments:

Post a Comment