Saturday, May 9, 2009

swamy1

ಹಂದಿಜ್ವರ ಹರಡಿದ ಅಮೆರಿಕ


ಡೀ ವಿಶ್ವವೀಗ ಹಂದಿಜ್ವರದ ಭೀತಿಯಲ್ಲಿದೆ. ಅಮೆರಿಕದ ನೆರೆಯ ದೇಶ ಮೆಕ್ಸಿಕೊದಲ್ಲಿ 150ಕ್ಕೂ ಹೆಚ್ಚು ಮಂದಿ ಈ ಜ್ವರದಿಂದ ಮೃತಪಟ್ಟಿದ್ದಾರೆ. ಪ್ರಪಂಚದ ಒಟ್ಟು 21 ದೇಶಗಳ ಸುಮಾರು 1,500 ಮಂದಿಗೆ ಜ್ವರದ ಸೋಂಕು ತಗುಲಿದೆ. ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳು ಜ್ವರದ ಭೀತಿಗೆ ಗಡಗಡನೆ ನಡುಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿವೆ. ಅಮೆರಿಕದ ಅಧ್ಯಕ್ಷ ಬಾರಕ್ ಒಬಾಮರಂತೂ ಈ ಜ್ವರ ಮುಂದೆ ಭೀಕರ ಪರಿಣಾಮಗಳನ್ನುಂಟು ಮಾಡಬಹುದು ಎಂದು ಭವಿಷ್ಯ ನಡುದಿದ್ದು, ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹಂದಿಜ್ವರದ ವೈರಸ್ ಎಂದೇ ಕರೆಯಲಾಗುತ್ತಿರುವ ಎ-ಎಚ್1ಎನ್1 ವೈರಸ್ ಹೆಚ್ಚು ಪ್ರಬಲವಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಹೇಳುತ್ತಿದೆ. ಅಲ್ಲದೆ, ಇದನ್ನು ಮಹಾಮಾರಿ ಎಂದು ಘೋಷಿಸಲು ಅದು ನಿರಾಕರಿಸಿದೆ. ಆದರೆ ಅಮೆರಿಕ ಆಡಳಿತಕ್ಕೆ ಮಾತ್ರ ಭೀತಿ ಕಡಿಮೆಯಾಗಿಲ್ಲ. ಎಷ್ಟೇ ಆದರೂ `ಕಳ್ಳನ ಮನಸ್ಸು ಹುಳ್ಳಗೆ ತಾನೆ?


ಏನಿದು ಹಂದಿಜ್ವರ?
`ಹಂದಿಜ್ವರ ಎಂದು ತಪ್ಪಾಗಿ ಕರೆಯಲಾಗುತ್ತಿರುವ ಈ ಇನ್ಫ್ಲುಯೆಂಝಾ(ಫ್ಲೂ)ಗೆ ಕಾರಣ ಎ-ಎಚ್1ಎನ್1 ಎಂಬ ವೈರಾಣು. 1918ರಲ್ಲಿ ಇದೇ ರೀತಿಯ `ಸ್ಪ್ಯಾನಿಷ್ ಫ್ಲೂ ಎಂಬ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡು ಪ್ರಪಂಚದಾದ್ಯಂತ ಐದು ಕೋಟಿ ಜನರನ್ನು ಬಲಿತೆಗೆದುಕೊಂಡಿತ್ತು. 1957ರಲ್ಲಿ ಏಷ್ಯನ್ ಫ್ಲೂ ಮತ್ತು 1968ರಲ್ಲಿ ಹಾಂಕಾಂಗ್ ಫ್ಲೂ ಎಂಬ ಮಹಾಮಾರಿಗಳು ವಿಶ್ವವನ್ನು ಹೆದರಿಸಿದ್ದವು. ಈಗ ಕಾಣಿಸಿಕೊಂಡಿರುವ ಈ ಹೊಸ ಮಾರಿ ಕೂಡ ಸಂಶೋಧಕರ ನಿದ್ರೆಗೆಡಿಸಿದೆ. ಏಕೆಂದರೆ ಇದರ ವೈರಾಣು ಸಹಜವಾಗಿಲ್ಲ!
ಹೌದು, ಎ-ಎಚ್1ಎನ್1 ಎಂದು ಕರೆಯಲಾಗುತ್ತಿರುವ ಹಂದಿ ಜ್ವರದ ವೈರಾಣು ಪ್ರಾಕೃತಿಕವಾಗಿ ಸೃಷ್ಟಿಯಾದಂತೆ ಕಾಣುತ್ತಿಲ್ಲ. ಇದರ ಹಿಂದೆ ಮಾನವನ ಕೈವಾಡವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳೇ ಅನುಮಾನಿಸಿದ್ದಾರೆ. ಅಂದರೆ ಯಾರೋ ಬೇಕೆಂದೇ ಈ ವೈರಾಣುವನ್ನು ಸೃಷ್ಟಿಸಿ, ಹಂದಿಜ್ವರವನ್ನು ಹರಡಿರಬಹುದು ಎಂಬ ಶಂಕೆ ಅವರದು.
ಎಚ್1ಎನ್1 ವೈರಾಣುವನ್ನು ವಿಶ್ಲೇಷಿಸಿದಾಗ ಅದರಲ್ಲಿ ಹಕ್ಕಿಯ, ಮಾನವನ ಮತ್ತು ಹಂದಿಯ ವೈರಾಣುಗಳು ಥಳಕು ಹಾಕಿಕೊಂಡು ಹೊಸ ರೂಪ ಪಡೆದಿರುವುದು ಗೊತ್ತಾಗಿದೆ. ಈ ರೀತಿ ಪ್ರಾಕೃತಿಕವಾಗಿ ವೈರಾಣುಗಳು ಥಳಕು ಹಾಕಿಕೊಂಡು ಹೊಸ ರೂಪ ಪಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲದಿದ್ದರೂ, ಈ ಕೆಲಸವನ್ನು ಸುಲಭವಾಗಿಯೇ ಮಾನವ ಮಾಡಿರುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಈ ರೀತಿಯ ಸಂಶೋಧನೆಗಳಿಗೆ ಈಗ ಬೇರೆಯದೇ ಆದ ಆಯಾಮಗಳಿದ್ದು, ಅದರಲ್ಲಿ ಮುಖ್ಯವಾದದು ಜೈವಿಕ ಅಸ್ತ್ರ ತಯಾರಿಕೆ.


ವೈರಾಣು ಸಿದ್ಧವಾಗಿದ್ದು ಅಮೆರಿಕದಲ್ಲಿ
ಶತ್ರುದೇಶವನ್ನು ಮಣಿಸಲು ಅಮೆರಿಕ ಈ ಹಿಂದಿನಿಂದಲೂ ಅನುಸರಿಸುತ್ತಿರುವ ಮಾರ್ಗಗಗಳಲ್ಲಿ ಜೈವಿಕ ದಾಳಿಯೂ ಒಂದು. ಪೆಂಟಗನ್ ಈ ರೀತಿಯ ಜೈವಿಕ ಅಸ್ತ್ರಗಳನ್ನು ರೂಪಿಸುವುದರಲ್ಲಿ ಎತ್ತಿದ ಕೈ. ಈಗಾಗಲೇ ಹಲವಾರು ರೋಗಾಣುಗಳನ್ನು ರೂಪಿಸಿ, ಅವುಗಳನ್ನು ಪ್ರಯೋಗಿಸಿ ಸಾವಿರಾರು ಮುಗ್ದ ನಾಗರಿಕರ ಸಾವಿಗೆ ಕಾರಣವಾಗಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ.
ಅಮೆರಿಕ ಸೇನೆ ಇದಕ್ಕಾಗಿಯೇ ವಿಶೇಷ ಘಟಕವನ್ನೂ ಹೊಂದಿದ್ದು, ಒಂದು ವರದಿ ಪ್ರಕಾರ ಆ ದೇಶದ ವಿವಿಧ ರಾಜ್ಯಗಳಲ್ಲಿ ಈ ಜೈವಿಕ ಅಸ್ತ್ರಗಳ ವಿವಿಧ ಮಾದರಿ ಕುರಿತು ಪ್ರಯೋಗ ನಡೆಸುವ ಸುಮಾರು 35 ಘಟಕಗಳಿವೆ.
ರೋಗ ಹರಡುವ ವೈರಾಣುಗಳನ್ನು ಸೃಷ್ಟಿಸುವ ಮೂಲಕ ಮಾನವ ಸಂಪನ್ಮೂಕ್ಕೆ ಹೊಡೆತ ನೀಡುವುದು, ಬೆಳೆ ನಾಶಮಾಡುವ ಹೊಸ ಹೊಸ ಕೀಟಗಳನ್ನು, ರೋಗಗಳನ್ನು ಸೃಷ್ಟಿಸಿ ಕೃಷಿ ಉತ್ಪಾದನೆಗೆ ಹೊಡೆತ ನೀಡುವುದು, ಅಪಾಯಕಾರಿ ರಾಸಾಯನಿಕಗಳನ್ನು ಗೊತ್ತಾಗದಂತೆ ಹರಡಿ ಸಾಮೂಹಿಕ ನರಹತ್ಯೆ ನಡೆಸುವುದು ಅಮೆರಿಕದ ಯುದ್ಧತಂತ್ರದ ಒಂದು ಭಾಗವಾಗಿದೆ. ಈಗ ಈ ಹಂದಿಜ್ವರವನ್ನೂ ಅಮೆರಿಕ ಜೈವಿಕ ಅಸ್ತ್ರವಾಗಿ ಬಳಸಿರಬಹುದು ಎಂಬ ಅನುಮಾನಗಳಿಗೂ ಸಾಕಷ್ಟು ಬಲವಾದ ಕಾರಣಗಳಿವೆ.
1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಫ್ಲೂ ಕೋಟ್ಯಂತರ ಜನರನ್ನು ಬಲಿ ತೆಗೆದುಕೊಂಡಿತ್ತು. ಈ ರೋಗದಿಂದ ಮೃತಪಟ್ಟ ಮಹಿಳೆಯೋರ್ವಳ ದೇಹವನ್ನು ಪತ್ತೆ ಹಚ್ಚಿದ್ದ ಅಮೆರಿಕ ಸೇನೆಯ ವಿಜ್ಞಾನಿಗಳು, ಆಕೆಯ ದೇಹದ ಜೀನ್ಸ್ಗಳನ್ನು ಸಂಗ್ರಹಿಸಿದ್ದರು. ಅದನ್ನು ಆಧಾರವಾಗಿಟ್ಟುಕೊಂಡು `ಎಚ್5ಎನ್1 ಎಂಬ ವೈರಾಣು ಸೃಷ್ಟಿಸಿದ್ದರು. ಈ ವೈರಾಣುವಿನಿಂದ ಬರುವ ಜ್ವರವನ್ನೇ ಹಕ್ಕಿಜ್ವರ ಎಂದು ಕರೆಯಲಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಜ್ವರ ತೃತೀಯ ರಾಷ್ಟ್ರಗಳಲ್ಲಿ ಎಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಕಾಣಿಸಿಕೊಂಡಿರುವ ಹಂದಿ ಜ್ವರದ ವೈರಾಣುವಿನಲ್ಲಿಯೂ ಹಕ್ಕಿಜ್ವರದ ಕೆಲ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಹಂದಿಜ್ವರವನ್ನು ಕೂಡ ಅಮೆರಿಕದ ವಿಜ್ಞಾನಿಗಳೇ ಸೃಷ್ಟಿಸಿದ್ದಾರೆ ಎಂದು ವಿಶ್ವಸಂಸ್ಥೆ ವಿಜ್ಞಾನಿಗಳೇ ಹೇಳುತ್ತಿದ್ದಾರೆ. ವಿಜ್ಞಾನಿಗಳ ಸಮುದಾಯ ಈ ಕುರಿತು ಆರೋಪ -ಪ್ರತ್ಯಾರೋಪಗಳಲ್ಲಿ ತೊಡಗಿದೆ. ಪಾಪಾ ಇದೇನೂ ತಿಳಿಯದ ಮೆಕ್ಸಿಕೋ ಮತ್ತಿತರ ದೇಶಗಳ ಮುಗ್ದ ಜನರ ಮರಣ ಹೋಮ ಮುಂದುವರೆದಿದೆ.
ಅಮೆರಿಕದಲ್ಲಿ ಈ ರೋಗಾಣು ಸೋರಿಕೆಯಾಗುತ್ತಿದ್ದಂತೆಯೇ ಅಲ್ಲಿಯ ಕೆಲ ಪತ್ರಿಕೆಗಳು ಇದು ಚೀನಾದ ಕೃತ್ಯ ಎಂದು ಆರೋಪಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಯಾರು, ಎಲ್ಲಿ ಈ ವೈರಾಣು ಸಿದ್ಧಪಡಿಸಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗಪಡಿಸುತ್ತೇವೆ ಎಂದು ಅವಾಜ್ ಹಾಕುತ್ತಿದ್ದಂತೆಯೇ ಅಮೆರಿಕ ಮಾಧ್ಯಮಗಳು ಬಾಲ ಮುದುರಿಕೊಂಡು ಕುಳಿತವು.
ಆದರೆ ಅಮೆರಿಕ ಅಧಿಕಾರಿಗಳು ಒಂದು ಯಡವಟ್ಟು ಮಾಡಿಕೊಂಡರು ಅದೇನೆಂದರೆ, ಈ ಅಪಾಯಕಾರಿ ವೈರಾಣು ಸೋರಿಕೆಯಾದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವಿಶ್ವ ಆರೋಗ್ಯಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಕೊನೆಗೆ ಅಮೆರಿಕದಲ್ಲಿಯೇ ಈ ವೈರಸ್ ಹರಡಲು ಆರಂಭವಾದಾಗ ಹೆದರಿ ಡಬ್ಲ್ಯುಎಚ್ಒನ್ನು ನಾವು ಎಚ್ಚರಿಸಿದರೂ ನಿರ್ಲಕ್ಷ್ಯ ತೋರಿತು ಎಂದು ಆರೋಪಿಸಿ ಗಲಾಟೆ ಮಾಡಿದರು. ಕೊನೆಗೆ ವಿಶ್ವಸಂಸ್ಥೆ ಅಧಿಕಾರಿಗಳಿಂದ ಇಕ್ಕಿಸಿಕೊಂಡಿದ್ದಾರೆ.


ಇದು ಎರಡನೇ ಬಾರಿ

ಅಮೆರಿಕ ಈ ರೀತಿ ತಾನೇ ಸಿದ್ಧಪಡಿಸಿದ ಬಾಂಬ್ನ್ನು ತನ್ನ ಕಾಲಮೇಲೇ ಹಾಕಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. 2001ರಲ್ಲಿ ಅಮೆರಿಕ ಮೇಲೆ ದಾಳಿ ನಡೆಯಿತಲ್ಲ, ಆಗ ಜೈವಿಕ ಅಸ್ತ್ರಗಳ ದಾಳಿ ಕೂಡ ನಡೆಯಬಹುದೆಂಬ ಆತಂಕವೂ ಎದುರಾಗಿತ್ತು. ಆಗ ತಾನೇ ಸಿದ್ಧಪಡಿಸಿದ ಆಂಥ್ರ್ಯಾಕ್ಸ್ನ ಪ್ರಯೋಗಿಸಿಕೊಂಡು ಭದ್ರತೆಯನ್ನು ಬಲಪಡಿಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಅದೆಲ್ಲಿ ಎಡವಟ್ಟಾಯಿತೋ ಏನೋ ದೇಶದ ಐವರು ನಾಗರಿಕರು ಆಂಥ್ರ್ಯಾಕ್ಸ್ಗೆ ಬಲಿಯಾದರು. ಇದರಿಂದ ಈ ಕುರಿತು ತನಿಖೆ ನಡೆಸುವುದು ಅನಿವಾರ್ಯವಾಯಿತು. ತನಿಖೆ ಸಂದರ್ಭದಲ್ಲಿ ಆರೋಪಿ ವೈದ್ಯನೋರ್ವ ಆತ್ಮಹತ್ಯೆ ಮಾಡಿಕೊಂಡ. ಪ್ರಕರಣ ಅಲ್ಲಿಗೆ ಅಂತ್ಯಗೊಂಡಿತು. ಆತ ಏಕೆ ಆತ್ಮಹತ್ಯೆಮಾಡಿಕೊಂಡ, ಅದೇನಾದರೂ ಕೊಲೆಯೇ? ಅಮೆರಿಕವನ್ನು ಪ್ರಶ್ನಿಸುವವರಾರು?

ಈಗ ಹೊಸ ವೈರಾಣು `ಹಂದಿಜ್ವರವನ್ನು ಕೂಡ ಅಮೆರಿಕ ಸೇನೆಯ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದೆ. ಇದು ನಿಜವಾಗಿಯೂ ಪರಿಣಾಮ ಬೀರಬಲ್ಲದೇ ಎಂದು ಪ್ರಯೋಗ ನಡೆಸಲುದ್ದೇಶಿಸಿದ್ದರು. ಅದೇಗೋ ಈ ವೈರಾಣು ಬಹುರಾಷ್ಟ್ರೀಯ ಕಂಪನಿ ಸ್ಮಿತ್ಫೀಲ್ಡ್ನ ಹಂದಿಫಾರಂಗಳಲ್ಲಿರುವ ಹಂದಿಗಳನ್ನು ಸೇರಿಕೊಂಡಿತ್ತು. ಈ ಕಂಪನಿ ಹೆಚ್ಚಾಗಿ ಮೆಕ್ಸೋದಲ್ಲಿ ಹಂದಿಫಾರಂಗಳನ್ನು ಹೊಂದಿದೆ. ಅಲ್ಲಿಯ ಫಾರಂ ಹಂದಿ ಮೂಲಕ ಮೊದಲಿಗೆ ಮೂರು ವರ್ಷದ ಬಾಲಕನಿಗೆ, ನಂತರ ಇತರರಿಗೆ ವೈರಾಣು ಸೋಂಕಿದೆ. ಅಲ್ಲಿಂದ ಅದು ಈಗ ವಿಶ್ವವ್ಯಾಪಿ. ಪಾಪ ಅಮೆರಿಕಕ್ಕೇ ಈ ರೋಗ ನಿಯಂತ್ರಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ತಾನು ತೋಡಿದ ಗುಂಡಿಯಲ್ಲಿ ತಾನೇ ಬಿದ್ದು ಅದು ಗುರ್ಗುಟ್ಟುತ್ತಿದೆ.
ವಿಶೇಶ ವೆಂದರೆ ಆಂಥ್ರ್ಯಾಕ್ಸ್ ಸೋರಿಕೆಯಾದ ಅಮೆರಿಕ ಸೇನೆಗೆ ಸೇರಿದ ಪ್ರಯೋಗಾಲಯದಿಂದಲೇ ಈ ಎಚ್1ಎನ್1 ವೈರಸ್ಕೂಡ ಸೋರಿಕೆಯಾಗಿದೆ ಎಂದು ಸೇನಾಮೂಲಗಳು ಹೇಳಿವೆ. ಈ ಪ್ರಯೋಗಾಲಯ ಮೇರಿ ಲ್ಯಾಂಡ್ನ ಫೊಟರ್್ ಡಿಟ್ರಿಕ್ನಲ್ಲಿದೆ. ಇದು ಅಮೆರಿಕ ಸೇನೆಯ ಬಹುದೊಡ್ಡ ಜೈವಿಕ ಪ್ರಯೋಗಾಲಯವಾಗಿದ್ದು, ಈಗ ಈ ವೈರಾಣು ಸೋರಿಕೆ ಬಗ್ಗೆ ಅತ್ಯುನ್ನತ ತನಿಖೆಗೆ ಆದೇಶ ನೀಡಲಾಗಿದೆ ಎಂದು ಈ ಪ್ರಯೋಗಾಲಯದ ವಕ್ತಾರ ಚಾದ್ ಜೋನ್ಸ್ ತಿಳಿಸಿದ್ದಾರೆ.


ಚಿಕೂನ್ ಗುನ್ಯಾದ ಜನಕ ಅಮೆರಿಕ
ಕೇವಲ ಹಂದಿ ಜ್ವರ ಮಾತ್ರವಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಭಾಗದಲ್ಲಿ ಈ ವರ್ಷವೂ ಮತ್ತೆ ಕಾಣಿಸಿಕೊಂಡಿರುವ ಚಿಕೂನ್ ಗುನ್ಯಾ ಕಾಯಿಲೆ ಸೃಷ್ಟಿಸಿದ್ದು ಕೂಡ ಅಮೆರಿಕವೇ.
ಚಿಕೂನ್ ಗುನ್ಯಾಕ್ಕೆ ಕಾರಣವಾಗಿರುವುದು `ಆಲ್ಫಾ ವೈರಸ್. ಇದನ್ನು ಜೈವಿಕ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಕೂಡ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯ ಡ್ರಗ್ಸ್ ಅಂಡ್ ಕ್ರೈಮ್ ವಿಭಾಗ ಈ ರೋಗಾಣುವಿನ ಬಗ್ಗೆ ಎಚ್ಚರಿಕೆಯಿಂದಿರಿ ಎಂದಿದೆ. ಅಮೆರಿಕ ರಕ್ಷಣಾ ಇಲಾಖೆಯ ಜೈವಿಕ ಅಸ್ತ್ರಗಳ ಪಟ್ಟಿಯಲ್ಲಿಯೂ ಇದರ ಹೆಸರಿದೆ.
ಈ ವೈರಸ್ 1952ರಲ್ಲಿಯೇ ತಾಂಜಾನಿಯಾದಲ್ಲಿ ಕಾಣಿಸಿಕೊಂಡಿತ್ತು. ಅಂದಿನಿಂದಲೂ ಈ ವೈರಾಣುವನ್ನು ಸೃಷ್ಟಿಸಿದವರು ಯಾರೆಂಬ ಚಚರ್ೆ ನಡೆಯುತ್ತಲೇ ಬಂದಿದೆ. ಆದರೆ ಅಮೆರಿಕ ಮೂಲದ ಸೇನಾ ಮಾಹಿತಿ ನೀಡುವ `ಗ್ಲೋಬಲ್ ಸೆಕ್ಯುರಿಟಿ ಡಾಟ್ ಕಾಮ್ ಎಂಬ ವೆಬ್ ಅಮೆರಿಕವೇ ಈ ವೈರಾಣು ಸೃಷ್ಟಿಸಿದೆ. ಇದನ್ನು 1975ರಲ್ಲಿಯೇ ಅಮರಿಕ ಅಧಿಕೃತವಾಗಿಯೇ ಒಪ್ಪಿಕೊಂಡಿದೆ ಎಂದು ಹೇಳುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ನಮ್ಮ ದೇಶದಲ್ಲಿ ಚಿಕೂನ್ ಗುನ್ಯಾದ ಕಾಟ ಅತಿಯಾಗಿದೆ. ಕೃಷಿ ಚಟುವಟಿಕೆ ಆರಂಭವಾಗುವ ಹೊತ್ತಿನಲ್ಲಿಯೇ ಈ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ನಮ್ಮ ದೇಶದ ರೈತರು ಪರದಾಡುತ್ತಿದ್ದಾರೆ. ದೇಶದ ಕೃಷಿ ಉತ್ಪಾದನೆ ಕುಸಿಯುವಂತೆ ಮಾಡಲು ಈ ಅಸ್ತ್ರ ಬಳಸಲಾಗುತ್ತಿದೆ ಎಂಬ ಅನುಮಾನಗಳಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ತಾಕತ್ತು ನಮ್ಮ ಸಕರ್ಾರಕ್ಕೆಲ್ಲಿದೆ?
ಇನ್ನು ನಮ್ಮ ರಾಜ್ಯದಲ್ಲಿ ಮಾತ್ರ, ಅದರಲ್ಲೂ ಮಲೆನಾಡಿನಲ್ಲಿ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಎಂದೇ ಹೆಸರಾಗಿರುವ `ಕ್ಯಾಸನೂರು ಕಾಡಿನ ಕಾಯಿಲೆಗೆ ಕಾರಣವಾಗುವ ವೈರಾಣುಗಳು ಕೂಡ ಜೈವಿಕ ಅಸ್ತ್ರವಾಗಿ ಬಳಸಲ್ಪಟ್ಟ ಏಜೆಂಟ್ಗಳು ಎಂದು ಸಾಬೀತಾಗಿದೆ. ಈ ರೋಗ ಕಾಣಿಸಿಕೊಂಡು ಸುಮಾರು ಆರು ದಶಕಗಳಾಗುತ್ತಾ ಬಂದಿದ್ದರೂ ಈ ಕಾಯಿಲೆಗೆ ಔಷಧ ಕಂಡುಹಿಡಿಯಲಾಗಿಲ್ಲ. ಹಕ್ಕಿಗಳ ಮೂಲಕ ಈ ವೈರಾಣುವನ್ನು ಹರಡುವ ಪ್ರಯೋಗ ನಡೆಸಲಾಗಿತ್ತೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕವೇ ಈ ವೈರಾಣುವನ್ನು ಸೃಷ್ಟಿಸಿದೆ. ಪಾಪ ಪ್ರತಿವರ್ಷ ಬಲಿಯಾಗುತ್ತಿರುವವರು ನಮ್ಮ ಮಲೆನಾಡಿನ ಜನರು.
ಭಾರತದ ನೆಲದಲ್ಲಿಯೇ ಅಮೆರಿಕ ಈ ರೀತಿಯ ವೈರಾಣುಗಳ ಪ್ರಯೋಗ ನಡೆಸಿದ ಉದಾಹರಣೆಗಳಿವೆ. 1975ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅಮೆರಿಕದ ಇಂತಯ ಯೋಜನೆಯೊಂದನ್ನು ರದ್ದು ಪಡಿಸಿದ್ದರು. ಹರಿಯಾಣದ ಸೊನೆಪತ್ನಲ್ಲಿ ಸೊಳ್ಳೆಗಳ ಮೇಲೆ ನಡೆಸಲು ಉದ್ದೇಶಿಸಿದ್ದ ಈ ಸಂಶೋಧನೆಯಿಂದ ಕಾಮಾಲೆ ಮತ್ತು ಡೆಂಗ್ಯೂಜ್ವರ ಹರಡುವ ಸೊಳ್ಳೆಗಳು ಉತ್ಪತ್ತಿಮಾಡಲಾಗುತ್ತಿತ್ತು. ಹೀಗೆ ತೃತೀಯ ದೇಶಗಳಲ್ಲಿ ಸಂಶೋಧನೆ ಹೆಸರಿನಲ್ಲಿ ಜೈವಿಕ ಅಸ್ತ್ರವಾಗಿ ಬಳಸಬಲ್ಲ ಏಜೆಂಟ್ಗಳನ್ನು ಸೃಷ್ಟಿಸುತ್ತಾ ಬಂದಿರುವ ಅಮೆರಿಕ, ಆಯಾ ದೇಶಗಳಲ್ಲಿಯೇ ಪ್ರಯೋಗ ನಡೆಸುವ ಪರಿಪಾಠವನ್ನು ರೂಢಿಸಿಕೊಂಡಿತ್ತು. (ಸೂರತ್ನಲ್ಲಿ ಪ್ಲೇಗ್ ಹರಡಲೂ ಇದೇ ರೀತಿಯ ಪ್ರಯೋಗ ಕಾರಣ) ಆದರೆ ತೃತೀಯ ದೇಶಗಳು ಎಚ್ಚೆತ್ತು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಮೆರಿಕ ತನ್ನ ದೇಶದಲ್ಲಿಯೇ ಈ ರೀತಿಯ ವೈರಾಣುಗಳನ್ನು ಸೃಷ್ಟಿಸಲು ಹೊಸ ಹೊಸ ಪ್ರಯೋಗಾಲಯಗಳನ್ನು ತೆರೆಯುತ್ತಿದೆ. ಅವುಗಳು ಸೋರಿಕೆಯಾಗಿ ಅನಾಹುತವಾದಾಗ ವಿಶ್ವಸಂಸ್ಥೆಯನ್ನು ದೂರತ್ತದೆ.

Friday, May 8, 2009

ಕಾಂಗ್ರೆಸ್ ಸೋತರೇ
ಪಕ್ಷವೇ ಹೊಣೆ!

ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲದಿದ್ದರೆ ಅದಕ್ಕೆ ಆ ಪಕ್ಷವೇ ನೇರ ಹೊಣೆ ಹೊರತು, ಮತದಾರರು ಬೆಂಬಲ ನೀಡದಿರುವುದಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತಪ್ಪು ಹೆಜ್ಜೆಗಳನ್ನಿಡುತ್ತಲೇ ಬಂದಿದೆ. ಈ ಬಾರಿ ಕೂಡ ಅಭ್ಯಥರ್ಿ ಆಯ್ಕೆಯಿಂದ ಹಿಡಿದು, ಪ್ರಚಾರದವರೆಗೆ ಪಕ್ಷ ಎಡವಿದ್ದು ಹಲವು ಕಡೆ.
ಅಂತಿಮ ಕ್ಷಣದಲ್ಲಿ ಅಭ್ಯಥರ್ಿಗಳ ಘೋಷಣೆ ಪಕ್ಷಕ್ಕೆ ಅಂಟಿರುವ ದೊಡ್ಡ ರೋಗ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಈ ರೀತಿ ಮಾಡಬಾರದು ಎಂದು ಪಕ್ಷದ ನಾಯಕರು ಭಾಷಣ ಮಾಡುತ್ತಾರೆ. ಮತ್ತೆ ಚುನಾವಣೆ ಘೋಷಣೆಯಾದಾಗ, ಪಕ್ಷದ ಹೈಕಮಾಂಡ್ ದಿಕ್ಕುತಪ್ಪಿಸಿ, ಗೊಂದ
ಲದ ವಾತಾವರಣ ನಿಮರ್ಿಸಿಸುತ್ತಾರೆ. ಅಭ್ಯಥರ್ಿ ಆಯ್ಕೆಯನ್ನು ವಿನಾಃ ಕಾರಣ ಜಟಿಲಗೊಳಿಸಲಾಗುತ್ತದೆ. ಕೊನೆಗೆ ಭಿನ್ನಮತಕ್ಕೆ ಹೆದರುವ ಹೈಕಮಾಂಡ್ ಕೊನೆ ಕ್ಷಣದಲ್ಲಿ ಅಭ್ಯಥರ್ಿಯನ್ನು ಘೋಷಿಸುತ್ತದೆ. ಇದರಿಂದ ಪ್ರಚಾರಕ್ಕೆ ಸಾಕಷ್ಟು ಸಮಯ ಸಿಗದೆ, ಸಿದ್ಧತೆ ಮಾಡಿಕೊಳ್ಳದ ಪಕ್ಷದ ಅಭ್ಯಥರ್ಿ ಹಿನ್ನಡೆ ಅನುಭವಿಸುತ್ತಾರೆ.
ರಾಜಕೀಯ ಪಂಡಿತರ ಪ್ರಕಾರ ಲೋಕಸಭಾ ಕ್ಷೇತ್ರವೊಂದರಲ್ಲಿ ವ್ಯವಸ್ಥಿತಿ ಪ್ರಚಾರ ನಡೆಸಬೇಕೆಂದರೆ ಓರ್ವ ಅಭ್ಯಥರ್ಿಗೆ ಕನಿಷ್ಠ ಮೂರು ತಿಂಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಕಾಂಗ್ರೆಸ್ಗೆ ಇದಿನ್ನೂ ಅರ್ಥವಾದಂತಿಲ್ಲ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಅಥವಾ ಒಂದೆರಡು ದಿನ ಮೊದಲು `ಬಿ' ಫಾರಂ ನೀಡಲಾಗುತ್ತದೆ. ಈ ಬಾರಿ ಮಂಡ್ಯದಲ್ಲಿ ಕಣಕ್ಕಿಳಿಸಿದ ಅಂಬರೀಷ್ಗೆ ಪಕ್ಷದ ನಾಯಕರೇ ಕೊನೆಯ ಕ್ಷಣದಲ್ಲಿ ಮನೆಗೆ ಹೋಗಿ ಬಿ ಫಾರಂ ನೀಡಿದ್ದು ಕಾಂಗ್ರೆಸ್ ಈ ವಿಷಯದಲ್ಲಿ ಹೊಂದಿರುವ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿಯಾಗಿ ಅನಂತ್ ಕುಮಾರ್ ಸ್ಪಧರ್ಿಸುವುದು ಖಚಿತವಾಗಿತ್ತು. ಇವರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ತೀಮರ್ಾನಿಸಿದ್ದು, ಚುನಾವಣೆಯ ಅಧಿಸೂಚನೆ ಹೊರ ಬಿದ್ದ ಮೇಲೆ. ಮೊದಲ ಎಸ್.ಎಂ. ಕೃಷ್ಣರ ಹೆಸರು ತೇಲಿಬಿಡಲಾಯಿತು, ಕೊನೆಗೆ ಕೃಷ್ಣ ಬೈರೇಗೌಡರಿಗೆ ಬಿ ಫಾರಂ ನೀಡಲಾಯಿತು. ಅದೂ ಕೊನೆಯ ಕ್ಷಣದಲ್ಲಿ. ಇದರಿಂದ ಸರಿಯಾಗಿ ಪ್ರಚಾರ ನಡೆಸಲಾಗಿಲ್ಲ ಎಂದು ಕೃಷ್ಣೆ ಬೈರೇಗೌಡ ಬಹಿರಂಗವಾಗಿಯೇ ಹೇಳಿದ್ದಾರೆ. ಒಂದು ವೇಳೆ ಅವರು ಸೋತರೆ ಪಕ್ಷದ ಈ ವಿಳಂಬ ನೀತಿಯಲ್ಲದೆ ಬೇರೇನೂ ಕಾರಣವಿರಲಿಕ್ಕಿಲ್ಲ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸ್ಪಧರ್ಿಸಿರುವ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಇದೇ ತಪ್ಪು ಮಾಡಿದೆ. ಮೊದಲಿಗೆ ಡಿ.ಕೆ.ತಾರಾದೇವಿಗೆ ಟಿಕೇಟ್ ಗ್ಯಾರಂಟಿ ಎಂದು ಹೇಳಲಾಗಿತ್ತು. ಅವರು ಒಂದು ಸುತ್ತು ಪ್ರಚಾರ ನಡೆಸಿದ್ದೂ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಜ್ಜನ ಜಯಪ್ರಕಾಶ್ ಹೆಗ್ಡೆಯನ್ನು ಕಣಕ್ಕಿಳಿಸಲಾಯಿತು. ರಾಜ್ಯದಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡಕ್ಷೇತ್ರ ಎನಿಸಿಕೊಂಡಿರುವ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಮೇಲೆ ಓಡಾಡಿ ಸರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತದೆಯೇ? ಆಥರ್ಿಕವಾಗಿ ಶಕ್ತರಲ್ಲದ ಹೆಗ್ಡೆ ಕೊನೆ ಕ್ಷಣದಲ್ಲಿ ಉಸಿರುಕಟ್ಟಿಕೊಂಡು ಸಾಧ್ಯವಾದ ಮಟ್ಟಿಗೆ ಪ್ರಚಾರ ನಡೆಸಿದ್ದಾರೆ. ಅವರು ಸೋತರೆ ಅವರಾಗಲೀ, ಪಕ್ಷದ ಕಾರ್ಯಕರ್ತರಾಗಲಿ ಹೊಣೆಯಲ್ಲ. ಒಂದಿಷ್ಟು ಸಿದ್ಧತೆ ಮಾಡಿಕೊಳ್ಳದ ಪಕ್ಷದ ನಾಯಕರು.
ಹೆಚ್ಚು ಕಡಿಮೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯಥರ್ಿಯನ್ನು ಕಣಕ್ಕಿಳಿಸುವ ಕುರಿತು ಪಕ್ಷ ಇದೇ ರೀತಿ ಗೊಂದಲ ಸೃಷ್ಟಿಸಿತು. ಅಭ್ಯಥರ್ಿಯಾರೆಂದು ಗೊತ್ತಾಗದೆ ಕ್ಷೇತ್ರದಲ್ಲಿನ ಪಕ್ಷದ ನಾಯಕರು ಗೊಂದಲದಲ್ಲಿ ಬಿದ್ದು, ತಂತ್ರಗಾರಿಕೆ ರೂಪಿಸುವುದನ್ನು ಮರೆತು ದಿಲ್ಲಿಯತ್ತ ಮುಖ ಮಾಡಿ ಕುಳಿತಿದ್ದರು. ಹೀಗೆ ಪಕ್ಷದ ಶಕ್ತಿಯನ್ನು ವ್ಯರ್ಥ ಮಾಡಿದ ಕೀತರ್ಿ ಪಕ್ಷದ ನಾಯಕರಿಗೆ ಮತ್ತು ಹೈಕಮಾಂಡ್ಗೇ ಸಲ್ಲಬೇಕು.


ನಿರ್ಲಕ್ಷ್ಯಕ್ಕೆ ಎಣೆಯೇ ಇಲ್ಲ
ಕಾಂಗ್ರೆಸ್ ತೋರಿಸಿದ ನಿರ್ಲಕ್ಷ್ಯ ಸಾಮಾನ್ಯವಾದದುದಲ್ಲ. ಚುನಾವಣೆ ಘೋಷಣೆಯಾಗಿ, ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿ, ಪ್ರಚಾರ ನಡೆಸುತ್ತಿದ್ದರೂ, ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಯಾವ ಮುಖಂಡರು ಎಲ್ಲಿ ಪ್ರಚಾರ ನಡೆಸುತ್ತಿದ್ದಾರೆಂಬ ಮಾಹಿತಿ ಕೆಪಿಸಿಸಿ ಬಳಿಯೇ ಇರಲಿಲ್ಲ. ರಾಜ್ಯದಲ್ಲಿ ಯಾವ ಯಾವ ನಾಯಕರನ್ನು ಪ್ರಚಾರಕ್ಕಿಳಿಸಬೇಕು, ಯಾರ್ಯಾರು ಯಾವ ಭಾಗದಲ್ಲಿ ಪ್ರಬಾವಶಾಲಿಗಳಾಗಿದ್ದಾರೆ, ಪ್ರಚಾರದ ರ್ಯಾಲಿಗಳನ್ನು ಎಲ್ಲೆಲ್ಲಿ ನಡೆಸಬೇಕು, ಯಾವ ರಾಷ್ಟ್ರನಾಯಕರನ್ನು ಎಲ್ಲಿಗೆ ಕರೆಸಿಕೊಳ್ಳಬೇಕು ಎಂಬ ಮಾಹಿತಿಯೇ ಇಲ್ಲದೆ ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿತ್ತು!
ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಮತ್ತು ಕಾಯರ್ಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮಗೆ ಇಷ್ಟ ಬಂದಲ್ಲಿ ಪ್ರಚಾರ ನಡೆಸುತ್ತಿದ್ದರು. ಉಳಿದವರು ಗೊಂದಲದಲ್ಲಿದ್ದರು. ಎಸ್.ಎಂ. ಕೃಷ್ಣರಂತೂ ಮನೆ ಬಿಟ್ಟು ಹೊರಟೇ ಇರಲಿಲ್ಲ. ಕೊನೆ ಕ್ಷಣದಲ್ಲಿ ಜಿ.ಪರಮೇಶ್ವರ್ರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಆಗ ಒಂದಿಷ್ಟು ವ್ಯವಸ್ಥಿತ ಪ್ರಚಾರ ಆರಂಭಗೊಂಡಿತ್ತು. ಇದೇ ಕೆಲಸವನ್ನು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮಾಡಿದ್ದರೆ, ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗಿರುತ್ತಿತ್ತು. ಆದರೆ, ಎಲ್ಲರೂ ಕಾಲೆಳೆಯುವ ರಾಜಕಾರಣದಲ್ಲಿಯೇ ಬಿಜಿಯಾಗಿರುವಾಗ ಈ ಬಗ್ಗೆ ಯೋಚಿಸುವವರಾದರೂ ಯಾರು?
ಇನ್ನು ರಾಜ್ಯ ಸಕರ್ಾರದ ವೈಫಲ್ಯಗಳನ್ನು ಜನತೆಯ ಮುಂದಿಡುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಬಹುದು. ರಸಗೊಬ್ಬರಕ್ಕಾಗಿ ಹೋರಾಟ ನಡೆಸುತ್ತಿರುವವರನ್ನು ಸಕರ್ಾರ ಗುಂಡಿಟ್ಟು ಕೊಂದಿದ್ದಾಗಲೀ, ವಗರ್ಾವಣೆಯ ದಂದೆಯಾಗಲೀ ಪರಿಣಾಮಕಾರಿಯಾಗಿ ಚುನಾವಣೆಯ ವಿಷಯವಾಗಲಿಲ್ಲ. ಗಣಿಗಾರಿಕೆ ಒಂದಿಷ್ಟು ಪ್ರಸ್ತಾಪಗೊಂಡಿದ್ದರೂ, ಬಿಜೆಪಿ ನಾಯಕರ ಬಾಯಿಕಟ್ಟುವ ಕೆಲಸವನ್ನು ಮಾಡಲಿಲ್ಲ. ಬಿಜೆಪಿ ಬಜೆಟ್ ಪ್ರಕಟಣೆಗಳನ್ನು ಸಾಧನೆ ಎಂದು ಬಿಂಬಿಸುತ್ತಿದ್ದರೆ, ಬಜೆಪಟ್ನಲ್ಲಿ ಪ್ರಕಟಿಸಿದ ಯೋಜನೆಗಳ ಜಾರಿ ಯಾವ ಹಂತದಲ್ಲಿವೆ, ಸಕರ್ಾರ ಹೇಗೆ ವಿಫಲವಾಗಿವೆ ಎಂದು ಮತದಾರರ ಗಮನಸೆಳೆಯಲಿಲ್ಲ.
ಇದಕ್ಕೆ ಬದಲಾಗಿ, ಕಾಂಗ್ರೆಸ್ ನಾಯಕರೇ ಮಲ್ಲಿಕಾಜರ್ುನ ಖಗರ್ೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯವನ್ನು ಬಿಜೆಪಿ ಮಂದಿಗೆ ಅಸ್ತ್ರವಾಗಿ ನೀಡಿದರು. ಸಿದ್ಧರಾಮಯ್ಯರಂತೂ ಈ ವಿಷಯದಲ್ಲಿ ಬೇಜವಬ್ದಾರಿಯಿಂದ ವತರ್ಿಸಿ, ಇನ್ನಷ್ಟು ಸಮಸ್ಯೆ ಸೃಷ್ಟಿಸಿದರು. ಕಾಂಗ್ರೆಸ್ ಮಾಡಿದ ಒಂದೇ ಒಂದು ಒಳ್ಳೇ ಕೆಲಸ ಎಂದರೆ ಸಿದ್ಧರಾಮ್ಯರಿಗೊಂದು ಹೆಲಿಕಾಪ್ಟರ್ ನೀಡಿ, ಅವರು ರಾಜ್ಯದಾದ್ಯಂತ ಪ್ರಚಾರ ನಡೆಸುವಂತೆ ಮಾಡಿದ್ದು!
ಕೆಪಿಸಿಸಿ ಪ್ರಚಾರದ ಸಂದರ್ಭದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳನ್ನು ಪಟ್ಟಿ ಮಾಡಿ, ಸಕರ್ಾರದ ವಿಫಲತೆಗಳ ಬಗ್ಗೆ ಟಿಪ್ಪಣಿ ಮಾಡಿ ಪಕ್ಷದ ನಾಯಕರಿಗೆ ಒದಗಿಸಿದ್ದರೆ, ಪರಿಣಾಮಕಾರಿಯಾಗಿ ಪ್ರಚಾರ ಸಾಧ್ಯವಾಗುತ್ತಿತ್ತು. ಯಾವುದೇ ಗೊತ್ತು ಗುರಿ ಇಲ್ಲದವರಂತೆ ಪಕ್ಷದ ನಾಯಕರು ಮಾತನಾಡಿದರು. ಹೀಗಾಗಿ ಬಿಜೆಪಿಯನ್ನು ಕಟ್ಟಿ ಹಾಕುವುದು ಪಕ್ಷಕ್ಕೆ ಕಟ್ಟವಾಯಿತು. ಇನ್ನು ಮಾಧ್ಯಮಗಳನ್ನು ಬಳಸಿಕೊಳ್ಳುವಲ್ಲಿಯೂ ಪಕ್ಷ ಹೆಚ್ಚಿನ ಮುತುವಜರ್ಿ ತೋರಿಸಲಿಲ್ಲ. ಒಟ್ಟಾರೆ ಪ್ರಚಾರವನ್ನು ವ್ಯವಸ್ಥಿತವಾಗಿ ಮಾಡಬೇಕೆಂಬ ಕಲ್ಪನೆಯೇ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಇದು ಸೋಲಿಗೆ ಕಾರಣವಾಗದಿರುತ್ತದೆಯೇ?


ಕಲಿಗಳ ಆಯ್ಕೆಯಲ್ಲಿ ಸೋತಿತು ಪಕ್ಷ
ಕಾಂಗ್ರೆಸ್ ಪಕ್ಷ ಒಂದಿಷ್ಟು ಬುದ್ಧಿವಂತಿಕೆ ಉಪಯೋಗಿಸಿ, ಕೆಲ ಕ್ಷೇತ್ರಗಳ ಅಭ್ಯಥರ್ಿಗಳನ್ನು ಆಯ್ಕೆ ಮಾಡಿದ್ದರೆ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಹಾಕುವುದು ಕಷ್ಟವೇನೂ ಆಗುತ್ತಿರಲಿಲ್ಲ.
ಉದಾಹರಣೆಗೆ ಬೆಂಗಳೂರಿನ ವಿಷಯಕ್ಕೆ ಬರೋಣ. ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಮಾಜಿ ಸಚಿವ ಜಾಫರ್ ಷರೀಫ್ರನ್ನೇ ಕಣಕ್ಕಿಳಿಸಿದಲ್ಲಿ ಗೆಲುವು ಖಚಿತವಾಗಿರುತ್ತಿತ್ತು. ಹೈಕಮಾಂಡ್ ಒಂದಿಷ್ಟು ಮುತುವಜರ್ಿ ವಹಿಸಿದ್ದರೆ ಸಾಂಗ್ಲಿಯಾನರನ್ನು ಸಮಾಧಾನ ಪಡಿಸುವುದು ಕಷ್ಟವೇನೂ ಆಗುತ್ತಿರಲಿಲ್ಲ. ಆಗ ಬೆಂಗಳೂರು ಉತ್ತರದಲ್ಲಿ ಕೃಷ್ಣ ಬೈರೇಗೌಡರನ್ನೇ ಕಣಕ್ಕಿಳಿಸಬಹುದಿತ್ತು. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಅವರ ಗೆಲುವಿನ ದಾರಿ ಕೂಡ ಸುಗಮವಾಗಿರುತ್ತಿತ್ತು. ಇತ್ತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಸ್.ಎಂ.ಕೃಷ್ಣರ ಮನವೊಲಿಸಿ ಕಣಕ್ಕಿಳಿಸಿದ್ದರೆ, ಸೋಮಣ್ಣ ಕೂಡ ಬಿಜೆಪಿ ಸೇರುತ್ತಿರಲಿಲ್ಲ. ಬೆಂಗಳೂರಿನ ಪ್ರಮುಖ ಮೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯಥರ್ಿಗಳು ಗೆಲ್ಲುವುದು ಖಚಿತವಾಗಿರುತ್ತಿತ್ತು. ಇದರಿಂದ ಬಿಜಿಪಿಯ ಹೃದಯಕ್ಕೇ ಪೆಟ್ಟುಕೊಟ್ಟಂತಾಗಿರುತ್ತಿತ್ತು. ಆದರೆ ಹೀಗೆ ನಿಷ್ಟೂರವಾಗಿ ತೀಮರ್ಾನ ತೆಗೆದುಕೊಳ್ಳಲು ಪಕ್ಷಕ್ಕೆ ಸಾಧ್ಯವಾಗದಿರುವುದೇ ಅದರ ದೌರ್ಬಲ್ಯ.